ವೈಶ್ವಾನರ -
	ವಿಶ್ವಾನರನೆಂಬ ಬ್ರಾಹ್ಮಣನ ಮಗ. ಈತನ ತಾಯಿ ಶುಚಿಮತಿ. ಜ್ಯೋತಿಮತಿ ಈತನ ಪಟ್ಟಣ. ವಿಶ್ವಾನರ ಮತ್ತು ಶುಚಿಮತಿಯರಿಗೆ ಬಹಳ ಕಾಲ ಮಕ್ಕಳಿಲ್ಲದೆ ಕಾಶೀಕ್ಷೇತ್ರಕ್ಕೆ ತೆರಳಿ ಶಿವನನ್ನು ಕುರಿತು ತಪಸ್ಸು ಮಾಡಿದರು. ಶಿವ ಪ್ರತ್ಯಕ್ಷನಾಗಿ ಪುತ್ರಸಂತಾನದ ವರ ನೀಡಿದ. ಶಿವನ ಕೃಪೆಯಿಂದ ಹುಟ್ಟಿದ ಪುತ್ರನಿಗೆ ವೈಶ್ವಾನರನೆಂದು ನಾಮಕರಣವಾಯಿತು. ಈತ ತನಗೆ ಬಾಲಾರಿಷ್ಟ ದೋಷವಿರುವುದನ್ನು ನಾರದನಿಂದ ತಿಳಿದ. ಇದರಿಂದ ಪಾರಾಗಲು ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಈ ಸಂದರ್ಭದಲ್ಲಿ ಇಂದ್ರ ಬಂದು ಬೇಕಾದ ವರವನ್ನು ಬೇಡುವಂತೆ ವೈಶ್ವಾನರನನ್ನು ಒತ್ತಾಯಿಸಿದ. ಇಂದ್ರನ ಬೇಡಿಕೆಯನ್ನು ಈತ ತಿರಸ್ಕರಿಸಿದ. ಸಿಟ್ಟಾದ ಇಂದ್ರ ವಜ್ರಾಯುಧದಿಂದ ವೈಶ್ವಾನರನನ್ನು ಹೊಡೆದ. ಆಗ ಶಿವ ಪ್ರತ್ಯಕ್ಷನಾಗಿ ಈತನನ್ನು ಮರಣ ಭಯದಿಂದ ಮುಕ್ತನಾಗಿಸಿದ. ದೇವತ್ವವನ್ನು ನೀಡಿ, ಆಗ್ನೇಯ ದಿಕ್ಕಿನ ಒಡೆಯನಾಗುವಂತೆ ಅನುಗ್ರಹಿಸಿದ. ಈತನಿಗೆ ಸ್ವಾಹಾ, ಸ್ವಧಾ ಎಂಬ ಇಬ್ಬರು ಪತ್ನಿಯರು. ಟಗರು ಈತನ ವಾಹನ.				(ನೋಡಿ- ಅಗ್ನಿ-1)	
						*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ